ಅದೇನೇ ಇದ್ದರೂ ನಾವು ನಮ್ಮ ಗಮನವನ್ನು ಈ ಕಾವ್ಯಭಾಷೆಯೆಂಬ ವಿಚಿತ್ರವಾದ ಶಕ್ತಿಯ ಬಗೆಗೆ ಕೇಂದ್ರಿಕರಿಸುವದಾದರೆ ನಾವು ಅದರ ಭಿನ್ನ ಸ್ವರೂಪವನ್ನು ,ಭಿನ್ನವಾದ ಶಕ್ತಿಯನ್ನು ಗುರುತಿಸಿಕೊಳ್ಳಬಹುದು.ಒಂದರ್ಥದಲ್ಲಿ ಈ ಬಗೆಯ ಭಾಷೆಯ ವಿಶಿಸ್ತ್ಥತೆಯ ಸ್ವರೂಪವೇನು,ಅದು ಹುಟ್ತುವದೆಲ್ಲಿಂದ ,ಅದಕ್ಕೂ ನಾವು ನಿತ್ಯ ಬಳಸುವ ಭಾಷೆಗೂ ಇರುವ ಅಂತರವೇನು,ಈ ಎಲ್ಲ ಪ್ರಶ್ನೆಗಳು ನಮ್ಮ ಕಾವ್ಯ-ಮಿಮಾನ್ಷೆಯ ಬಹು ಮುಖ್ಯ ಚಿಂತನೆಗಳಾಗಿವೆ
ಒಂದೆಂದರೆ ಈ ಕಾವ್ಯ ಭಾಷೆಯ ಮೊಟ್ಟಮೊದಲ ಭಿನ್ನ ಸ್ವರೂಪವೆನ್ದರೆ ಅದು ಹೇಳುತ್ತದೆ,ತೋರಿಸುತ್ತದೆ,ಕೇಳಿಸುತ್ತದೆ,ಆದರೆ ಅದೇನು ಮಾಡಿದರೂ ಅದರ ಅರ್ಥದ ಸ್ವರೂಪವು ನಮ್ಮ ಲೋಕಭಾಷೆಯ ಬಗೆಯಲ್ಲಿ ಇರುವದಿಲ್ಲ.ಒಂದು ವೇಳೆ ಅದು ಲೋಕ ಭಾಷೆಯಲ್ಲಿಯೇ ಇದೆ ಎಂದಂತೆ ಕಂಡರೂ ಅದರ ಒಳ ವ್ಯವಸ್ಥೆ ಬೇರೆಯೇ ಆಗಿರುತ್ತದೆ.ಈ ಭಿನ್ನತೆಯ ಒಂದು ಗುಣವೆಂದರೆ ಅದರ ಅರ್ಥದ ರೀತಿ ಲೋಕಭಾಷೆಯ ಭಾವದ ವ್ಯಾಕರಣವನ್ನು ಪಾಲಿಸುವದಿಲ್ಲ.''ಚಂದ್ರಮುಖಿ'' ಎಂಬ ಶಬ್ದಕ್ಕೆ ಹಾಗೆ ನೋಡಿದರೆ ಅದು ಕಟ್ಟಿ ಕೊಡುವ ಭಾವ ಜಗತ್ತಿನ ಹೊರಗೆ ಅದಕ್ಕೆ ಅಸ್ತಿತ್ವವೇ ಇಲ್ಲ .ಈ ಭಾವ ಜಗತ್ತಿನ ಸದಸ್ಯರಾಗದ ಮನುಷ್ಯರಿಗೆ ಅದು ಒಂದು
ಹುಚ್ಚುತನವಾಗಿಯೂ ಕಂಡೀತು.ಅಥವಾ ಶಬ್ದ,ಕಾಲ,ಬುದ್ಧಿಯ ದುಂದು ಬಳಕೆಯೇನ್ದೂ ಎನ್ನಿಸಬಹುದು.ಆದರೆ ಇದನ್ನೆಲ್ಲಾ ಮೀರಿಯೂ ಈ ಬಗೆಯ ಭಾವ ಜಗತ್ತಿನಲ್ಲಿ ಬದುಕುವ,ಈ ಬಗೆಯ ಭಾಷೆಯ ಅವಶ್ಯಕತೆಯನ್ನು ಆಳವಾಗಿ ಅನುಭವಿಸುವ ಮನುಷ್ಯರು ಯಾವ ಕಾಲದಲ್ಲೂ ಇದ್ದೆ ಇದ್ದರು,ಇದ್ದೆ ಇರುತ್ತಾರೆ
No comments:
Post a Comment