ಒಂದರ್ಥದಲ್ಲಿ ಕಾವ್ಯ ಬರೆಯುವ ಹಾಗು ಓದುವ ಎರಡೂ ಕ್ರಿಯೆಗಳೂ ಒಂದೇ ಶಕ್ತಿಯ ಆವಿರ್ಭಾವಗಳು.ಇಬ್ಬರಿಗೂ ಆ ಪ್ರಬಲವಾದ
ಸಾಮರ್ಥ್ಯ ಇರಲೇಬೇಕು.ಹಾಗೆಂದೇ ಅದನ್ನು ಭಾವಯಿತ್ರಿ ಪ್ರತಿಭೆ ಹಾಗೂ ಕಾರಯಿತ್ರಿ ಪ್ರತಿಭೆ ಎಂದು ಗುರುತಿಸಿ ಅವುಗಳ ನಡುವಿನ ಅವಿನಾಭಾವ ಸಂಬಂಧವನ್ನು ಸರಿಯಾಗಿಯೇ ಗುರುತಿಸಲಾಗಿದೆ.
ಆದರೆ ರೂಪುಗೊಂಡ ಕಾವ್ಯಭಾಷೆಯ ಅನುಭವ ನಮಗಾಗಲು ಅದರ ವಿಸಂಕೇತಿಕರಣವನ್ನು ನಾವು ಮಾದಿಕೊಳಲೆಬೇಕಾಗುತ್ತದೆ ಈ ವಿಸಂಕೆತಿಕರಣದ ಪಾಠಗಳನ್ನು ನಾವು ಶೈಕ್ಷನಿಕವಾಗಿ ಕಲಿಸಲಾರೆವು.ಆದರೆ ಸಾಕ್ಷರತೆಯ ಅತಿಯಾದ ಪ್ರಸರಣದಿಂದ ಅಕ್ಷರ ಬಲ್ಲವರೆಲ್ಲರಿಗೂ ,-ಕಾವ್ಯಭಾಷೆಯೂ ಅಕ್ಷರಗಲನ್ನೆ ಒಳಗೊಂಡಿರುವದರಿಂದ -ನಾನೂ ಕೂಡ ಈ ಭಾಷೆಯನ್ನೂ ತಿಳಿಯಲು ಹಕ್ಕುದಾರನೆಂಬ ಅಹಂಕಾರವು ಬೆಳೆಯುತ್ತದೆ.ಅಕ್ಷರ ರೂಪಿ ಭಾಷೆಯ ಒಳಗಿನ ಸೂಕ್ಷ್ಮತೆಗಲನ್ನು ಗಮನಿಸದೆ ಎಲ್ಲವನ್ನು ಅರ್ಥವಿಸಬಹುದಾದ ಭಾಷೆಯೆಂದು ತಿಳಿಯುವ ಈ ಬಗೆಯ ಗಮನಿಕೆಗಳು ಭಾಷೆಯ ಅರ್ಥದಾಚೆಗಿನ ಅಸ್ತಿತ್ವವನ್ನೇ ನಿರಾಕರಿಸುವ ಅತಿರೆಕಕ್ಕೂ ಒಮ್ಮೊಮ್ಮೆ ಹೋಗುತ್ತುವೆ.ಆಗ ಕಾವ್ಯವೆಂದರೆ ಯಾವುದೋ ಒಂದು ಅರ್ಥವನ್ನು ಬಿಡುಗಡೆ ಮಾಡುವ ಸಾಧನವಾಗಿ
ಮಾತ್ರವಾಗಿ ಕಾಣತೊಡಗುತ್ತದೆ.ಇಷ್ಟೇ ಏಕೆ ತಪ್ಪಿ ಕಾವ್ಯದ ಒಳ ಮೈಯಲ್ಲಿ ಅನೇಕ ಅರ್ಥದಾಚೆಗಿನ ಪದರುಗಳು ಓದುಗನನ್ನು ಬಾ ಎಂದು ಕರೆಯುತ್ತಿದ್ದರೂ ಆತನ ಪ್ರಜ್ಞೆ ಆ ಕರೆಗೆ ಕುರುಡಾಗಿರುತ್ತದೆ ಇಲ್ಲವೇ ಕಿವುಡಾಗಿರುತ್ತದೆ ಇದನ್ನೇ ನಾವು ಕಾವ್ಯ ಸಂಸ್ಕೃತಿಯ ಅವಸರ್ಪಿಣಿ ಕಾಲವೆಂದು ಕರೆಯಬಹುದು.ಈ ಮೊದಲೇ ಗುರುತಿಸಿದಂತೆ ಕಾರಯಿತ್ರಿ ಮತ್ತು ಭಾವಯಿತ್ರಿ ಶಕ್ತಿಗಳ
ಜೀವಕೆಂದ್ರವು ಒಂದೇ ಆಗಿರುವದರಿಂದ ಅವುಗಳ ಸಮಸ್ಯೆ ಪ್ರತ್ಯೇಕವಾಗಿ ಇರುವದೆ ಇಲ್ಲ .ಹೀಗಾಗಿ ಕಾವ್ಯ ಓದುವವನ ಸಮಸ್ಯೆ ಹಾಗು ಕಾವ್ಯ ಬರೆಯುವವನ ಸಮಸ್ಯೆಗಳು ಎಲ್ಲೊ ಒಂದೆಡೆ ಒಂದೇ ಮೂಲದ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

No comments:
Post a Comment