ಈ ಬಗೆಯ ಅತಿ ನಿಷ್ಟುರವಾದ ಬಿಡಿತನದ ನಂಬಿಕೆಯು ಎರಡು ಮುಖ್ಯ ಪರಿಣಾಮಗಳನ್ನು ನಮ್ಮ ನೋಟಗಳಿಗೆ ತರುತ್ತದೆ.ಒಂದೆಂದರೆ ಅದು ಮನುಷ್ಯನ ಸಮೂಹದ ಒಳಗಿನ ಅಸ್ತಿತ್ವವನ್ನು ಮಿರಬೇಕಾದ ,ಇಲ್ಲವೇ ದಾಟಬೇಕಾದ,ಅಥವಾ ಹೇಗಾದರೂ ಮಾಡಿ ಬಿಡಿಸಿಕೊಂಡು ಹೊರಬರಬೇಕಾದ ಬಂಧನವನ್ನಾಗಿ ಪರಿಭಾವಿಸುತ್ತದೆ.ಅಂದರೆ ಲೋಕಜಿವನದ ನಮ್ಮ ಎಲ್ಲ ಅಂಟಿನ ನಂಟುಗಳು ಕ್ರಮೇಣ ಅವುಗಳಿಂದ ಬಿಡಿಸಿಕೊಂಡು ಹೊರ ಬರಬೇಕಾದ ''ಗಂಟು'' ಗಳೇ ಆಗಿವೆ.ಆದರೆ ಏನಿದ್ದರು ಮನುಷ್ಯನಿಗೆ ಸಾಮೂಹಿಕ ಅಸ್ತಿತ್ವದ ಹಂಗು ಬಿಟ್ಟದ್ದಲ್ಲ .ಅವನಿಗೆ ನಿತ್ಯ ಬೇಕಾಗುವ ಸುಖ,ಸೌಕರ್ಯ,ಸುರಕ್ಷಿತತೆ,ಇವುಗಳಿಗಾಗಿ ಆತ ತನ್ನ ಪಕ್ಕದ ಅಥವಾ ತನಗೆ ಪರಿಚಯವೇ ಇರದ ಹಲವಾರು ಮನುಷ್ಯರ ಮತ್ತು ಮನುಷ್ಯ ವ್ಯವಸ್ಥೆಗಳ ದಾಸನಾಗಿಯೇ ಬದುಕಬೇಕಾಗುವದು ಅನಿವಾರ್ಯವಾದ ಕ್ರಿಯೆ ಆಗಿದೆ.ಲೋಕದ ನಂಟುಗಳನ್ನು ಬಂಧನವೆಂದು ಬಿಂಬಿಸುವ ವಕ್ತಾರರೂ ತಮಗೆ ಅನಿವಾರ್ಯ ಇದ್ದಸ್ತಾದರು ಈ ಲೋಕಬಂಧದ ಮೇಲೆ ಅವಲಂಬಿತರೆ.ಎಲ್ಲ ಧಾರ್ಮಿಕ ಅಸ್ರದ್ಧೆಗಳ ಮೂಲವು ಇಲ್ಲಿಯೇ ಇದೆ ಎನ್ನಿಸುತ್ತದೆ.ಒಂದೆಡೆ ಲೋಕಬಂಧದಿಂದ ಹೊರಬರಬೇಕೆಂಬ ಹೇಳಿಕೆ ,ಇನ್ನೊಂದೆಡೆ ಅದರ ವ್ಯಾಪ್ತಿ ಪ್ರದೇಶದ ಹೊರಗೆ ಕಾಲಿಡುವದು ಆ ಬಗೆಯ ವಕ್ತಾರರಿಗೂ ಸಾಧ್ಯವಿಲ್ಲದ ವಾಸ್ತವ ಇವುಗಳಿಂದಾಗಿಯೇ ಧಾರ್ಮಿಕ ವ್ಯಕ್ತಿತ್ವಗಳು ಸುಳ್ಳು ಹೇಳುತ್ತಿವೆ,ಜಗತ್ತನ್ನು ಮೊಸಗೊಳಿಸುತ್ತಿವೆ ಎಂಬ ನಿಲುವು ಸಾರ್ವಜನಿಕವಾಗಿ ಒಪ್ಪಿತಗೊಳ್ಳುತ್ತ ಹೋಗುತ್ತದೆ.ಈ ಸಂಕಟವನ್ನು ಅರಿತೆ ಎಲ್ಲ ಧರ್ಮಗಳೂ ತಮ್ಮದೆಆದ ಒಂದು ಹಾವೇರಿ-ನ್ಯಾಯವನ್ನು ನಿರೂಪಿಸಲು ಪ್ರಯತ್ನಿಸಿವೆಯಾದರೂ
ಅವು ಎಷ್ಟು ಸಂಶಯಕ್ಕೆ ಎಡೆಮಾಡಿ ಕೊಡುತ್ತವೆ ಎಂದರೆ ಆಧುನಿಕ ಪ್ರಜ್ಞೆ ಅದನ್ನು ಒಪ್ಪುವದು ಬಹಳ ಕಷ್ಟ ವೆನಿಸುತ್ತದೆ.
ಅವು ಎಷ್ಟು ಸಂಶಯಕ್ಕೆ ಎಡೆಮಾಡಿ ಕೊಡುತ್ತವೆ ಎಂದರೆ ಆಧುನಿಕ ಪ್ರಜ್ಞೆ ಅದನ್ನು ಒಪ್ಪುವದು ಬಹಳ ಕಷ್ಟ ವೆನಿಸುತ್ತದೆ.
No comments:
Post a Comment